Thursday, August 27, 2009

ಸ್ಸು ಬೆಂಗಳೂರಿಂದ ಹೋರಟಿದ್ದು ಲೇಟು. ಇಲ್ಲದಿದ್ದರೆ ಬೆಳಗ್ಗೆ 6:50ಕ್ಕೆ ಕಳಸ ತಲುಪಿರುತ್ತಿದ್ದೆ. ಅಲ್ಲಿಂದ ಬಸ್ರಿಕಟ್ಟೆಯ ನನ್ನ ಮನೆಗೆ 18ಕಿಮಿ. ಮೂರು ವರ್ಷಗಳಾದ ಮೇಲೆ ಹಬ್ಬಕ್ಕೆ ಮನೆಗೆ ಹೋರ‍ಟಿದ್ದು. ಸಹಜ ಕುತೂಹಲ ಜೊತೆಗೆ ರಾಶಿ ಪ್ರೀತಿ. ಕಳಸದಲ್ಲಿ ಇಳಿದಾಗಲೇ ಗೊತ್ತಾಗಿದ್ದು ಅದೇ ಬಸ್ಸಲ್ಲಿ ಹಳೇಯ ಖಾಯಂ ದೋಸ್ತ್‍ಗಳೂ ಇದ್ದರು ಅಂತ. ಕಳಸದಿಂದ ಮನೆ ಕಡೆ ಹೋಗೋ ಬಸ್ ಹತ್ತಿ ಕೊನೇಯ ಸೀಟಿನ ಮೂಲೆಯಲ್ಲಿ ಮುದುಡಿ ಕೂತೆ. ಸೀಳಿ ಬರುತ್ತಿತ್ತು ಛಳಿ ಗಾಳಿ. ಕಿವಿ ಬೆಚ್ಚಗಿರಲಿ ಅಂತಾ ಪ್ಲೇಯರ್ ಸಿಕ್ಕಿಸಿಕೊಂಡೆ. ಜೊತೆಗೆ ಇಷ್ಟದ ಹಾಡು. ಲೆಕ್ಕವಿಲ್ಲದಷ್ಟು ಸಲ ಓಡಾಡಿದ ಆ ದಾರ‍ಿಯಲ್ಲಿ ಕಳೆದುಹೋದ ನೆನಪುಗಳಿಗೆ ಲೆಕ್ಕವಿಲ್ಲ. ತಣ್ಣನೆಯ ಮುಂಜಾವಿನ ಸಿಹಿಗಾಳಿಯ ಜೊತೆಗೆ ಅವೂ ಹಿಂದೆಯೇ ಬರುತ್ತಿದ್ದವೋ ಏನೊ.

ಹುಟ್ಟೂರಿಗೆ ಕಾಲಿಡುತ್ತಿದ್ದಾಗಿನ ಪುಟ್ಟ ಖುಷಿಯ ಕಿಮ್ಮತ್ತೇ ಬೇರೆ. ಬಸ್ಸಿನಿಂದಿಳಿದ್ದು ಗೂಡಂಗಡಿ ಮೋಚುರಿಗೆ ಸಣ್ಣದೊಂದು ಸಲಾಮು ಹೊಡೆದು ಸಿಕ್ಕ ನಗುವಿನ ಜೊತೆ ಒಂಚೂರು ಮಾತು. ಮನೆ ಓಳಹೋಗುವ ಮುನ್ನ ಖಾಸಾ ದೋಸ್ತ್ ಶರೂ ಹಾಗು ಸಮ್ಮು ಸಿಕ್ಕಾಗ ಮತ್ತಷ್ಟು ಹೆಚ್ಚಿತ್ತು ಹಳ್ಳಿ ಪ್ರೀತಿ. ಮನೆಯ ಓಳ ಹೊಕ್ಕೆ. ಪಾತ್ರೆಗೆ ಸೋಪು ಹಚ್ಚುತ್ತಿದ್ದಳು ಅಮ್ಮ. ನಾನು ಬಂದಾಗ ಅವಳಲ್ಲಿನ ಹೊಸ ನಗು ಕಂಡುಹಿಡಿಯುವ ರೀತಿ ನನಗೆ ಹೊಸದಲ್ಲ. ‘ಇತ್ತೆ ಬತ್ತನಾ? ನಿದ್ರೆ ಬತ್ತುಂಡಾ?’ (ಇವಾಗ ಬಂದಿಯಾ? ನಿದ್ರೆ ಬಂತಾ?) (ಮನೆ ಬಾಷೆ ತುಳು) ಮನೆ ಬಿಟ್ಟು ೯ ವರ್ಷಗಳಾದರೂ ಆಕೆಯ ಕಾಳಜಿ, ಆರೈಕೆ, ನೀರು ದೋಸೆ ಹಾಗೂ ಚಹಾ ಇನ್ನೂ ಬದಲಾಗಿಲ್ಲ. ಎಷ್ಟಾದರೂ ಅಮ್ಮ ಅಲ್ವಾ.
ಸುಮ್ಮನೆ ಕೂರೋ ರೀತಿನೇ ಗೊತ್ತಿಲ್ಲ ಅಪ್ಪನಿಗೆ. ಹಳ್ಳಿಯ ಪ್ರತಿ ಅಪ್ಪಂದಿರೂ ಹೀಗೆನೇ. ಕೆಲಸವೇ ಅವರಿಗೆ ಸಮಾನ ಹಾಗೂ ಸಮಾಧಾನ. ಗ್ಯಾರೇಜಿನ ಮೆಶೀನುಗಳ ಮಧ್ಯೆ ಗ್ರ‍ಿಸು ಮೆತ್ತಿದ ಕೈಗಳಿಂದ ಕನ್ನಡಕ ತೆಗೆದು ಕ್ಷೇಮ ವಿಚಾರಿಸಿದರು. ಬೆಚ್ಚಗೆ ಬ್ರೇಕ್ ಫಾಸ್ಟ್ ಮಾಡಿ ಊರು ಸುತ್ತೋಕೆ ಹೊರ‍ಟೆ.

ಬಸ್ರಿಕಟ್ಟೆ ಬದಲಾಗಿಲ್ಲ. ಬದಲಾಗೋದೂ ನಮಗೆ ಬೇಕಿಲ್ಲ. ಎರಡು ವರ್ಷಕ್ಕೊಮ್ಮೆ ಇಲ್ಲಿನ ರಸ್ತೆಗೆ ಡಾಂಬಾರು ಹಚ್ಚಿ ಹೋಗುತ್ತಾರೆ. ಕಾಲುದಾರಿಯಲ್ಲಿ ಬರಿಗಾಲಲ್ಲಿ ಮೈಲಿಗಟ್ಟಗೆ ನಡೆಯೋ ಇಲ್ಲಿಯವರಿಗೆ ಅದು ಕಾಡುವ ಸಮಸ್ಯೆಯೇನಲ್ಲ. ಸ್ವಚ್ಛ ಊರು. ಹಾಗೆಯೇ ಮನಸ್ಸಿರೋ ಜನ. ಹತ್ತಿರದ ಊರು ಕುಪ್ಪಳ್ಳಿ, ಪಕ್ಕಕ್ಕೆ ತಾಗಿ ಮಲಗಿರೋ ಕಾಫಿ ತೋಟ, ತಲೆ ಇತ್ತಿ ಮುಖ ಮಾಡಿರೋ ಕುದುರೆಮುಖ, ನೆರಳಾಗಿ ನಿಂತಿರೋ ಮೇರುತಿ ಬೆಟ್ಟ. ಅರೆಕ್ಷಣ ಅಲ್ಲಿ ನಿಂತಿದ್ದ ನಾನು ಬರೇ ಸೂಕ್ಷ್ಮ! ಬಹುಶಃ ಇದೇ ಇರಬೇಕು ಹಳ್ಳಿ ಪ್ರೀತಿ.

ಉಳಿದೆರಡೂ ದಿನ ಗಮ್ಮತ್ತು. ಹಬ್ಬ ಹಬ್ಬ ಹಬ್ಬ. ಆತ್ಮೀಯ ಗೋಪಾಲ್ ಹಾಗೂ ಗೆಳೆಯರೊಂದಿಗೆ ತಡರಾತ್ರಿಯ ಸುಗಮ ಸಂಗೀತ. ನೆನೆಸಿಕೊಂಡರೆ ನಗು. ಜಿಟಿ ಜಿಟಿ ಮಳೆಯೊಂದಿಗೆ ಸಂಭ್ರಮದ ಓಡಾಟ. ಇಷ್ಟಾದರೂ ಕೆಲಸದೂರು ಬೆಂಗಳೂರು ನೆನಪಾಗಲಿಲ್ಲ. ನೆನಪು ಮಾಡಿಕೊಳ್ಳಲೂ ಮನಸಾಗುತ್ತಿರಲಿಲ್ಲ.

ಮೂರನೇ ಕ್ಲಾಸಿನಲ್ಲಿರುವಾಗ ಶಂಕರ ಹೆಗಡೆ ಅಂಗಂಡಿಯಿಂದ ಮಸಾಲೆ ಕಡಲೆ ಕದ್ದಾಗ ಆದ ಅನುಮಾನವೇ ದೊಡ್ಡದೆಂದು ನಂಬಿದ್ದೆ. ಆದರೆ ಅದಕ್ಕಿಂದ ಮಿಗಿಲಾದ ಮೊಗೆದಷ್ಟು ಪ್ರೀತಿ ಈ ಊರಲ್ಲಿದೆ ಅನ್ನೋದು ಈಗ ಕಂಡುಕೊಂಡಿದ್ದೀನಿ. ಎಲ್ಲೋ ಓದಿದ್ದೆ. ‘ಬದುಕು ಪ್ರಿಯ ಅನಿಸೋದು ಅಲ್ಲಿಯ ಸುಂದರ ಕಟ್ಟಡಗಳಿಂದಲ್ಲ. ಸುತ್ತಲ ಜನರಿಂದ’. ಮತ್ತೆ ಮುಂಜಾವು. ನುಗ್ಗಿ ಬರುತ್ತಿತ್ತು ಮಳೆ. ವಾಪಾಸು ಹೊರಡಬೇಕು ರಾಜಧಾನಿಗೆ. ಆ ಜಡಿ ಮಳೆಯಲ್ಲೂ ಬೈಕ್ ಏರಿ ಬಸ್ಸು ಹತ್ತಿಸಿದ ಆತ್ಮೀಯ ಆನಂದ್.
ಬಿಟ್ಟು ಬಂದಿದ್ದೀನಿ. ಮೆತ್ತಗೆ ಕಾಡುವ ಮಾತನಾಡುವ ಊರನ್ನು ಮತ್ತೆ ಬರುತ್ತೀನಿ ಅನ್ನೋ ಮಾತು ಕೊಟ್ಟು. ಮುಂದಿನ ಬಾರಿ ನೀವೂ ಬನ್ನಿ. ನನ್ನೂರಿಗೆ...

Friday, August 21, 2009


Wednesday, August 19, 2009

Sunday, August 16, 2009

ತಂಗಾಳಿ ತಂದೆಯಾ ನನ ಬಾಳಲೀ...

ಟೈಮ್ ಪಾಸ್ ಅಂತಾ ಕನ್ನಡ ‘ಲವ್ ಗುರು’ ಚಿತ್ರದ ಹಾಡಿಗೆ ಶಾರುಕ್ ಖಾನ್ ನಟಿಸಿರೋ ಹಾಡುಗಳ ಕೆವಲನ್ನು ಮಿಕ್ಸ್ ಮಾಡಿದ್ದೇನೆ. ನೋಡ್ತೀರಲ್ವಾ...youtube link : http://www.youtube.com/watch?v=9sfT0TTocvg

Friday, August 7, 2009

‘ಆಣಿ’ ಮುತ್ತು...

ದುರಂಗದ ಮುಂದೆ ಕೂತು ಚದರಿ ಹೋದ ಕನಸುಗಳ ಕಲೆ ಹಾಕೋದೂ ಒಂಥರಾ ಮಜಾ ಅಲ್ವಾ? ನಾವೆಲ್ಲ ಅದರೊಳಗಿನ ಸೈನಿಕರು. ನಮ್ಮನ್ನು ನಡೆಸೋರು ಇನ್ಯಾರೋ. ಹೇಳೋದು ಮರೆತಿದ್ದೆ, ‘ಚೆಕ್ ಮೇಟ್’!ನಿಜ. ಕೆಲವೊಮ್ಮೆ ಮೌನವೇ ಹಿತ ಅನಿಸೋದು. ಆದರೆ... ನೀ ಬಿಟ್ಟರೆ ನನಗಿನ್ಯಾರು ಹೇಳು. ನನ್ನೀ ಮೌನದ ಓಳಹೊಕ್ಕು ಚೆಂದದ ನಗು ಮೂಡಿಸೋ ತಾಕತ್ತು ಇರೋದು ನಿನಗೆ ಮಾತ್ರ ತಿಳ್ಕೊ.ದಿಯೊಳಗಿನ ಪ್ರೀತಿ ಬಗ್ಗೆ ಹೇಳುತ್ತೀನಿ ಅಂದ್ಯಲ್ಲಾ, ಹೇಳು ಇವಾಗ. ಮತ್ತೊಂದು ಸಣ್ಣ ಅಲೆ ಮೂಡಿ ಮತ್ತೊಲ್ಲೋ ಸುಳಿಯೂಗಿ ನೆನಪುಗಳೆಲ್ಲಾ ಸುಳಿವಿಲ್ಲದೆ ಅಳಿಸಿಹೋಗುವ ಮುನ್ನ. ಹೇಳು ಪ್ಲೀಸ್..ನಾನಿದ್ದೀನಿ. ನೋವನ್ನೆಲ್ಲಾ ಪಕ್ಕಕ್ಕಿಡು. ಮಾತನಾಡು. ಬಾಯಿ ನೋವಾಗುವಷ್ಟು, ಮನಸು ಹಗುರಾಗುವಷ್ಟು. ನೀನು ಮತ್ತೊಮ್ಮೆ ನಗುವಾಗಬೇಕು. ನಲಿದಾಡುವ ಮಗುವಾಗಬೇಕು.


ಲಿದಾಡಬೇಕು. ನೀನಿಲ್ಲ. ಸಾಕೆನಿಸದಷ್ಟು ಧೈರ್ಯ ತುಂಬಿ ಹೊತ್ತು ಕಂತುವ ಹೊತ್ತಲ್ಲಿ ಮತ್ತೆ ಮೆತ್ತಗೆ ಮಾತಾಡಲು ನೀನಿಲ್ಲ. ನೀನಂದಿದ್ದು ನಿಜ. ಮೌನವೇ ಹಿತ.
ಛೆ! ಹಾಗಾಗಲಿಕ್ಕಿಲ್ಲ. ನನ್ನಲ್ಲಿ ಪ್ರೀತಿ ಹುಟ್ಟಿಸಿ ಮತ್ತೊಲ್ಲೋ ಮುತ್ತಾಗುವ ಹುಡುಗ ಅವನಲ್ಲ. ಗೊತ್ತು ನನಗೆ. ಬಂದೇ ಬರುತ್ತಾನೆ. ನದಿ ಪ್ರೀತಿ ಹುಟ್ಟೋ ರೀತಿ ಹೇಳುತ್ತಾನೆ. ಬರುತ್ತಿಯಲ್ವಾ...


ತ್ತೊಲ್ಲೋ ಬಂಧಿಯಾಗಿದ್ದೇನೆ. ಇದ್ಯಾವ ಲೆಕ್ಕ ನಿನ್ನ ಪ್ರೀತಿ ಬೆಚ್ಚಗೆ ಬಂಧಿಸಿರುವಾಗ... ಸಾಧ್ಯವಾದರೆ ಕ್ಷಮಿಸು