Friday, August 7, 2009

‘ಆಣಿ’ ಮುತ್ತು...

ದುರಂಗದ ಮುಂದೆ ಕೂತು ಚದರಿ ಹೋದ ಕನಸುಗಳ ಕಲೆ ಹಾಕೋದೂ ಒಂಥರಾ ಮಜಾ ಅಲ್ವಾ? ನಾವೆಲ್ಲ ಅದರೊಳಗಿನ ಸೈನಿಕರು. ನಮ್ಮನ್ನು ನಡೆಸೋರು ಇನ್ಯಾರೋ. ಹೇಳೋದು ಮರೆತಿದ್ದೆ, ‘ಚೆಕ್ ಮೇಟ್’!ನಿಜ. ಕೆಲವೊಮ್ಮೆ ಮೌನವೇ ಹಿತ ಅನಿಸೋದು. ಆದರೆ... ನೀ ಬಿಟ್ಟರೆ ನನಗಿನ್ಯಾರು ಹೇಳು. ನನ್ನೀ ಮೌನದ ಓಳಹೊಕ್ಕು ಚೆಂದದ ನಗು ಮೂಡಿಸೋ ತಾಕತ್ತು ಇರೋದು ನಿನಗೆ ಮಾತ್ರ ತಿಳ್ಕೊ.ದಿಯೊಳಗಿನ ಪ್ರೀತಿ ಬಗ್ಗೆ ಹೇಳುತ್ತೀನಿ ಅಂದ್ಯಲ್ಲಾ, ಹೇಳು ಇವಾಗ. ಮತ್ತೊಂದು ಸಣ್ಣ ಅಲೆ ಮೂಡಿ ಮತ್ತೊಲ್ಲೋ ಸುಳಿಯೂಗಿ ನೆನಪುಗಳೆಲ್ಲಾ ಸುಳಿವಿಲ್ಲದೆ ಅಳಿಸಿಹೋಗುವ ಮುನ್ನ. ಹೇಳು ಪ್ಲೀಸ್..ನಾನಿದ್ದೀನಿ. ನೋವನ್ನೆಲ್ಲಾ ಪಕ್ಕಕ್ಕಿಡು. ಮಾತನಾಡು. ಬಾಯಿ ನೋವಾಗುವಷ್ಟು, ಮನಸು ಹಗುರಾಗುವಷ್ಟು. ನೀನು ಮತ್ತೊಮ್ಮೆ ನಗುವಾಗಬೇಕು. ನಲಿದಾಡುವ ಮಗುವಾಗಬೇಕು.


ಲಿದಾಡಬೇಕು. ನೀನಿಲ್ಲ. ಸಾಕೆನಿಸದಷ್ಟು ಧೈರ್ಯ ತುಂಬಿ ಹೊತ್ತು ಕಂತುವ ಹೊತ್ತಲ್ಲಿ ಮತ್ತೆ ಮೆತ್ತಗೆ ಮಾತಾಡಲು ನೀನಿಲ್ಲ. ನೀನಂದಿದ್ದು ನಿಜ. ಮೌನವೇ ಹಿತ.
ಛೆ! ಹಾಗಾಗಲಿಕ್ಕಿಲ್ಲ. ನನ್ನಲ್ಲಿ ಪ್ರೀತಿ ಹುಟ್ಟಿಸಿ ಮತ್ತೊಲ್ಲೋ ಮುತ್ತಾಗುವ ಹುಡುಗ ಅವನಲ್ಲ. ಗೊತ್ತು ನನಗೆ. ಬಂದೇ ಬರುತ್ತಾನೆ. ನದಿ ಪ್ರೀತಿ ಹುಟ್ಟೋ ರೀತಿ ಹೇಳುತ್ತಾನೆ. ಬರುತ್ತಿಯಲ್ವಾ...


ತ್ತೊಲ್ಲೋ ಬಂಧಿಯಾಗಿದ್ದೇನೆ. ಇದ್ಯಾವ ಲೆಕ್ಕ ನಿನ್ನ ಪ್ರೀತಿ ಬೆಚ್ಚಗೆ ಬಂಧಿಸಿರುವಾಗ... ಸಾಧ್ಯವಾದರೆ ಕ್ಷಮಿಸು

26 comments:

Umesh Balikai said...

ಏಕಾಂತ ರವರೆ,

ನಾನು ಇದುವರೆಗೆ ನೋಡಿರುವ ಬ್ಲಾಗುಗಳಲ್ಲಿ ನಿಮ್ಮದು ತುಂಬಾ ವಿಶಿಷ್ಟವಾದುದು ಅನ್ನಿಸ್ತು. ನಿಜಕ್ಕೂ ತುಂಬಾ ಚೆನ್ನಾಗಿದೆ. ವಿಶೇಷವಾಗಿ ಈ ಪೋಸ್ಟ್; ಪುಟ್ಟ ಪುಟ್ಟ ಚಿತ್ರಗಳು ಮತ್ತು ಅವುಗಳ ಜೊತೆ ಪೊಣಿಸಿದ ಅಕ್ಷರಗಳು ತುಂಬಾ ಆಕರ್ಷಕವಾಗಿ ಕಾಣಿಸ್ತಿವೆ.

ನೀವು ನನ್ನ ಬ್ಲಾಗಿಗೆ ಭೇಟಿ ನೀಡಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

- ಉಮೇಶ್

varnavilas said...

this one is really awesome! very simple, symbolic and i think if u would have shown human beings it wouldn't have been this effective! of all the designs u hv done this is my favourite-:)

ಬಾಲು said...

muttu galu super ide. Innu photo gala bagge vishesha vaagi helale beku. ondondu photo galu saaviraaru feel kodutte.

lakshmikantha ra ekanthakke enu kaarana?

ನಲಿದಾಡಬೇಕು. ನೀನಿಲ್ಲ. ಸಾಕೆನಿಸದಷ್ಟು ಧೈರ್ಯ ತುಂಬಿ ಹೊತ್ತು ಕಂತುವ ಹೊತ್ತಲ್ಲಿ ಮತ್ತೆ ಮೆತ್ತಗೆ ಮಾತಾಡಲು ನೀನಿಲ್ಲ. ನೀನಂದಿದ್ದು ನಿಜ. ಮೌನವೇ ಹಿತ.!!
houdenu? :)

Sundaravaada muttugalu.

ಮನಸು said...

wow super!!! tumba istavaaytu...

ಏಕಾಂತ said...

ಹಾಯ್ ಉಮೇಶ್ - ಬಹಳ ತೂಕವುಳ್ಳ ಬರವಣಿಗೆ ಜವಾಬ್ದಾರಿ ಹೆಚ್ಚಿಸುವ ಕಮೆಂಟ್ ನೀಡಿದ್ದೀರಿ. ಬಹಳ ಖುಷಿಯಾಯ್ತು. ಯಾವುದೋ ಫಾರ‍್ವರ್ಡ್ ಮೇಲ್ ಬಂದಿದ್ದ ಚಿತ್ರಗಳಿವು. ಅವಕ್ಕೆ ಪುಟ್ಟ ಸಾಲು ಸೇರಿಸಿದರೆ ಹೇಗೆ ಅಂತಂಡುಕೊಂಡು ಬರೆದದ್ದು. ಮೆಚ್ಚುನುಡಿಗೆ ಋಣಿ. ಮತ್ತೆ ಬನ್ನಿ...

Vilas - The images are so emotional thought of adding few words from my side. I hope it worked well as i saw you comment. Thank you for visiting. Come more often

ಹಾಯ್ ಬಾಲು - ಸಾವಿರ ಸಲ ಯೋಚಿಸಿದ್ರೂ ಉತ್ತರಿಸಲಾಗದ ಪ್ರಶ್ನೆ ಮುಂದಿಟ್ಟಿದ್ದೀರಿ. ಒಬ್ಬಂಟಿಯಾಗಿರುವಾಗ ಹುಟ್ಟಿಕೊಳ್ಳುವ ಸಾಲುಗಳಿಗೆ ಉತ್ತರಿಸೋದು ಸ್ವಲ್ಪ ಕಷ್ಟನೇ. ಮೊದಲೆಲ್ಲ ಅದು ಕೇವಲ ಹೆಸರಷ್ಟೇ ಏಕಾಂತ ಅಂತಾ ಯಾಮಾರಿಸಿ ಬಿಡುತ್ತಿದ್ದೆ. ಆದರೆ ವಾಸ್ತವ ನೀವು ಪತ್ತೆ ಹಚ್ಚಿಬಿಡುತ್ತೀರಿ. ಇಲ್ಲಿ ಅದು ಚಿತ್ರಕ್ಕೆ ಹೊಂದುಸಿ ಬರೆದ ಸಾಲು. ಮೆಚ್ಚಿಕೊಂಡದ್ದು ಖುಷಿಯಾಯ್ತು. ಮತ್ತೊಮ್ಮೆ ಬನ್ನಿ...

ಏಕಾಂತ said...

ಹಾಯ್ ಮನಸು - ಹೇಗಿದ್ದೀರಾ? ಬಂದದ್ದು ಖುಷಿ. ನಿಮ್ಮ ಪ್ರೋತ್ಸಾಹ ಸದಾ ಇರಲಿ. ಹೀಗೇ ಬರುತ್ತಿರಿ...

ಸಿಮೆಂಟು ಮರಳಿನ ಮಧ್ಯೆ said...

ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ...
ಬರವಣಿಗೆ ತುಂಬಾ ಆಪ್ತವಾಗಿದೆ....

ಹೊಸತನ ಇಷ್ಟವಾಗಿಬಿಡುತ್ತದೆ.....

ಅಭಿನಂದನೆಗಳು...

ಏಕಾಂತ said...

ಹಲೋ ಪ್ರಕಾಶ್...
ನಿಮ್ಮ ಕಮೆಂಟ್ ಕೂಡಾ ಆಪ್ತವಾಗಿದೆ.
ಬ್ಲಾಗೊಳಗೆ ಬಂದದ್ದಕ್ಕೆ ಥ್ಯಾಂಕ್ ಯು.ಇಷ್ಟಪಟ್ಟಿದ್ದು ಖುಷಿ.
ಮತ್ತೆ ಬನ್ನಿ...

ರೂpaश्री said...

ವಾಹ್!! ತುಂಬಾ ತುಂಬಾ ಚೆನ್ನಾಗಿದೆ.. ಆ ಫೋಟೋಗಳು, ಅದನ್ನು ನೀವು ಟಿಲ್ಟ್ ಮಾಡಿ ಪೋಸ್ಟ್ ಮಾಡಿರೋ ರೀತಿ, ಸುಂದರ ಸಾಲುಗಳು.. ಎಲ್ಲವೂ ಸೂಪರ್!!

ಮನಸು said...

Congrats!!! nimma blog kendasampigeyalli parichayisiddare..

ಏಕಾಂತ said...

ಹಲೋ ರೂಪಶ್ರೀ ಅವ್ರೆ..
ಬಂದದ್ದು ತುಂಬಾ ಸಂತೋಷ. ಡಿಸೈನಿಂಗ್ ಗೀಳು ಹತ್ತಿಕೊಂಡ ನಂತರ ಹೀಗೊಂದು ಬ್ಲಾಗ್ ಮಾಡಬೇಕು ಅದರ ತುಂಬಾ ಹೊಸ ಡಿಸೈನ್ ತುಂಬಿಡಬೇಕು ಅನ್ನೋ ಆಸೆ ಇತ್ತು. ಉದಾಸಿನ ಬಿಟ್ಟಿಲ್ಲ. ನಿಮ್ಮೆಲ್ಲರ ಪ್ರೋತ್ಸಾಹ. ಮತ್ತೆ ಬರೆಯುತ್ತೇನೆ. ಪುನಃ ಬನ್ನಿ...

ಹಲೋ ಮನಸು...
ಬೆಳಗ್ಗೆನೆ ದೋಸ್ತ್ ಫೋನಾಯಿಸಿ ಕೆಂಡಸಂಪಿಗೆಯಲ್ಲಿ ಪರಿಚಯವಿದೆ ಅಂತ ಹೇಳಿದ.ನೀವು ತಿಳಿಸಿದ್ದು ಖುಷಿ ಹೆಚ್ಚಿಸಿದೆ. ಕೆಂಡಸಂಪಿಗೆಗೂ ಋಣಿ.ಮತ್ತೆ ಬನ್ನಿ...

suresh kota said...

ಲಕ್ಷ್ಮೀಕಾಂತ್,
ನಿಮ್ಮ ಬ್ಲಾಗ್ ಚೆನ್ನಾಗಿದೆ ಮಾರಾಯ್ರೆ.
ಮತ್ತೆ..ನೀವು ಹೇಗಿದ್ದೀರಿ? ಕೆಲಸ ಹೇಗೆ ನಡೀತಿದೆ?

ಏಕಾಂತ said...

ನಮಸ್ತೆ ಸುರೇಶ್...
ಹೇಗಿದ್ದೀರಿ? ಹುಡುಕಿ ಕಮೆಂಟ್ ಮಾಡಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ನಂಬರ್ ಕಳೆದುಕೊಂಡಿದ್ದೇನೆ.
ಹೇಗಿವೆ ಕೆಲಸ ಹಾಗೂ ನಿಮ್ಮ ರೇಖೆಗಳು. ತುಂಬಾ ಉಪಕಾರ ಮಾಡಿದ್ದೀರಿ. ಋಣಿ.
ಮತ್ತೆ ಸಿಗುತ್ತೀರಲ್ಲಾ...

ಎಚ್.ಎನ್. ಈಶಕುಮಾರ್ said...

ಏಕಾಂತ ಹಾಗೆಸುಮ್ಮನೆ ಸೋಮಾರಿತನದಿಂದ ಎದ್ದು ಬಂದು ಒಂದೇ ಗುಕ್ಕಿಗೆ ಎಲ್ಲವನು ಚೊಕ್ಕವಾಗಿ ಬರೆದು,ಓದಲು ಬಿಟ್ಟ ಹಾಗೆ ಇದೆ ನಿನ್ನ ಬರಹಗಳು,ಏನೇ ಹಾಗಲಿ ಸ್ವಾಗತ ಬರಹ ಲೋಕಕೆ.....

ಏಕಾಂತ said...

ಥ್ಯಾಂಕ್ ಯು ಈಶ!
ಸೋಮಾರಿತನಕ್ಕೊಂದು ಬ್ರೇಕ್ ಕೋಡಲೇಬೇಕಂತ ಬರೆದದ್ದು.
ನಿಮ್ಮೆಲ್ಲರ ಮೆಚ್ಚುನುಡಿಗಳನ್ನು ರಾಶಿ ಹಾಕಿಟ್ಟಿದ್ದೇನೆ. ಮತ್ತೇ ಕೂತು ಬರೆಯಬೇಕು.
ಹೀಗೇ ಬರುತ್ತಿರು ಗೆಳೆಯ...

ಹರೀಶ ಮಾಂಬಾಡಿ said...

Blog presentation is very beautiful

Anonymous said...

ನಿಮ್ಮ ಬ್ಲಾಗ್ ನಿಜಕ್ಕೂ ಸಕ್ಕತ್ತಾಗಿದೆ,

ಕಂಗ್ರಾಟ್ಸ್..

ಏಕಾಂತ said...

Hi Harish...
Thank you so much for your genuine comment. please do come more often..


ಹಾಯ್ ರಂಜಿತ್...
ನೀವು ಹೀಗಂದರೇನೆ ಮತ್ತೊಂದು ಹೊಸತನಕ್ಕೆ ಕೈ ಹಾಕಲು ಹುರುಪು ಸಿಗೋದು. ಖುಷಿಯಾಯ್ತು. ಹೀಗೇ ಬರುತ್ತಿರಿ...

srinidhi odilnala said...

hai laxmi. nijakku ondondu salugalu athi madhura... sundara. odi kushi aythu kano. heege Baritha iru...

ಏಕಾಂತ said...

thank you so much nidhi...

SUMNE...! said...

super.... thumba chennagude. Nanna blog ge bheti needi pratikriye nididdakke ananta dhanyavaadagalu. Continue posting.

ಏಕಾಂತ said...

ಹಾಯ್ ಸದಾಶಿವ್
ಧನ್ಯವಾದಗಳು. ಹೀಗೇ ಬರುತ್ತಾ ಇರಿ. ನಿಮ್ಮೆಲ್ಲರ ಪ್ರೋತ್ಸಾಹ ನಿರಂತರ ಇರಲಿ.
ನಿಮ್ಮ ಬ್ಲಾಗ್ ಕೂಡಾ ಚೆನ್ನಾಗಿದೆ. ಮತ್ತೆ ಸಿಗೋಣ...

minchulli said...

ನಿನ್ನ ಬ್ಲಾಗ್ ಇವತ್ತು ನೋಡಿದಾಗ tumbaa ಖುಷಿ. namma jategiddavaru adaralloo namaginta kiriyaru chendage beLeyuvudu kandaaga vismaya sambhrama eradoo jategE... heegE bareetaa iru.. ninna kunchakke hosa baNNagaLu olidu barali..

"ಅಮ್ಮನ ಪ್ರೀತಿಯಲ್ಲಿ ಅಪ್ಪನ ಆದರ್ಶಗಳ ಜೊತೆಯಿದ್ದ ಪ್ರತಿಯೊಬ್ಬರಿಗೂ ಲೇಖನ ಆಪ್ತವಾಗಿತ್ತದೆ." nii bareda ii vaakya tumbaa tattitu.

ಏಕಾಂತ said...

ನಮಸ್ತೆ ಶಮ. ಹೇಗಿದ್ದೀರಿ? ಬಂದದ್ದಕ್ಕೆ ಥ್ಯಾಂಕ್ಸ್. ಹಬ್ಬ ಹೇಗಾಯಿತು? ನಿಮ್ಮ ಆಶಯ ಸದಾ ಇರಲಿ. ಅಪ್ಪ ಅಮ್ಮ ಬಗ್ಗೆ ಎಷ್ಟು ಬರೆದರೂ ಕಮ್ಮಿನೇ. ಅದು ಬತ್ತದ ಪ್ರೀತಿ. ಹೀಗೇ ಬರುತ್ತಾ ಇರಿ. ನಿರೀಕ್ಷೆ ಸದಾ...

ಗೌತಮ್ ಹೆಗಡೆ said...

putta putta kavitegalu chennagive kanri:)

ಏಕಾಂತ said...

ಹಾಯ್ ಗೌತಮ್...ಥ್ಯಾಂಕ್ ಯು ಸೋ ಮಚ್! ಹೀಗೇ ಬರುತ್ತಿರಿ. ಮತ್ತೆ ಸಿಗೋಣ.