Thursday, August 27, 2009

ಸ್ಸು ಬೆಂಗಳೂರಿಂದ ಹೋರಟಿದ್ದು ಲೇಟು. ಇಲ್ಲದಿದ್ದರೆ ಬೆಳಗ್ಗೆ 6:50ಕ್ಕೆ ಕಳಸ ತಲುಪಿರುತ್ತಿದ್ದೆ. ಅಲ್ಲಿಂದ ಬಸ್ರಿಕಟ್ಟೆಯ ನನ್ನ ಮನೆಗೆ 18ಕಿಮಿ. ಮೂರು ವರ್ಷಗಳಾದ ಮೇಲೆ ಹಬ್ಬಕ್ಕೆ ಮನೆಗೆ ಹೋರ‍ಟಿದ್ದು. ಸಹಜ ಕುತೂಹಲ ಜೊತೆಗೆ ರಾಶಿ ಪ್ರೀತಿ. ಕಳಸದಲ್ಲಿ ಇಳಿದಾಗಲೇ ಗೊತ್ತಾಗಿದ್ದು ಅದೇ ಬಸ್ಸಲ್ಲಿ ಹಳೇಯ ಖಾಯಂ ದೋಸ್ತ್‍ಗಳೂ ಇದ್ದರು ಅಂತ. ಕಳಸದಿಂದ ಮನೆ ಕಡೆ ಹೋಗೋ ಬಸ್ ಹತ್ತಿ ಕೊನೇಯ ಸೀಟಿನ ಮೂಲೆಯಲ್ಲಿ ಮುದುಡಿ ಕೂತೆ. ಸೀಳಿ ಬರುತ್ತಿತ್ತು ಛಳಿ ಗಾಳಿ. ಕಿವಿ ಬೆಚ್ಚಗಿರಲಿ ಅಂತಾ ಪ್ಲೇಯರ್ ಸಿಕ್ಕಿಸಿಕೊಂಡೆ. ಜೊತೆಗೆ ಇಷ್ಟದ ಹಾಡು. ಲೆಕ್ಕವಿಲ್ಲದಷ್ಟು ಸಲ ಓಡಾಡಿದ ಆ ದಾರ‍ಿಯಲ್ಲಿ ಕಳೆದುಹೋದ ನೆನಪುಗಳಿಗೆ ಲೆಕ್ಕವಿಲ್ಲ. ತಣ್ಣನೆಯ ಮುಂಜಾವಿನ ಸಿಹಿಗಾಳಿಯ ಜೊತೆಗೆ ಅವೂ ಹಿಂದೆಯೇ ಬರುತ್ತಿದ್ದವೋ ಏನೊ.

ಹುಟ್ಟೂರಿಗೆ ಕಾಲಿಡುತ್ತಿದ್ದಾಗಿನ ಪುಟ್ಟ ಖುಷಿಯ ಕಿಮ್ಮತ್ತೇ ಬೇರೆ. ಬಸ್ಸಿನಿಂದಿಳಿದ್ದು ಗೂಡಂಗಡಿ ಮೋಚುರಿಗೆ ಸಣ್ಣದೊಂದು ಸಲಾಮು ಹೊಡೆದು ಸಿಕ್ಕ ನಗುವಿನ ಜೊತೆ ಒಂಚೂರು ಮಾತು. ಮನೆ ಓಳಹೋಗುವ ಮುನ್ನ ಖಾಸಾ ದೋಸ್ತ್ ಶರೂ ಹಾಗು ಸಮ್ಮು ಸಿಕ್ಕಾಗ ಮತ್ತಷ್ಟು ಹೆಚ್ಚಿತ್ತು ಹಳ್ಳಿ ಪ್ರೀತಿ. ಮನೆಯ ಓಳ ಹೊಕ್ಕೆ. ಪಾತ್ರೆಗೆ ಸೋಪು ಹಚ್ಚುತ್ತಿದ್ದಳು ಅಮ್ಮ. ನಾನು ಬಂದಾಗ ಅವಳಲ್ಲಿನ ಹೊಸ ನಗು ಕಂಡುಹಿಡಿಯುವ ರೀತಿ ನನಗೆ ಹೊಸದಲ್ಲ. ‘ಇತ್ತೆ ಬತ್ತನಾ? ನಿದ್ರೆ ಬತ್ತುಂಡಾ?’ (ಇವಾಗ ಬಂದಿಯಾ? ನಿದ್ರೆ ಬಂತಾ?) (ಮನೆ ಬಾಷೆ ತುಳು) ಮನೆ ಬಿಟ್ಟು ೯ ವರ್ಷಗಳಾದರೂ ಆಕೆಯ ಕಾಳಜಿ, ಆರೈಕೆ, ನೀರು ದೋಸೆ ಹಾಗೂ ಚಹಾ ಇನ್ನೂ ಬದಲಾಗಿಲ್ಲ. ಎಷ್ಟಾದರೂ ಅಮ್ಮ ಅಲ್ವಾ.
ಸುಮ್ಮನೆ ಕೂರೋ ರೀತಿನೇ ಗೊತ್ತಿಲ್ಲ ಅಪ್ಪನಿಗೆ. ಹಳ್ಳಿಯ ಪ್ರತಿ ಅಪ್ಪಂದಿರೂ ಹೀಗೆನೇ. ಕೆಲಸವೇ ಅವರಿಗೆ ಸಮಾನ ಹಾಗೂ ಸಮಾಧಾನ. ಗ್ಯಾರೇಜಿನ ಮೆಶೀನುಗಳ ಮಧ್ಯೆ ಗ್ರ‍ಿಸು ಮೆತ್ತಿದ ಕೈಗಳಿಂದ ಕನ್ನಡಕ ತೆಗೆದು ಕ್ಷೇಮ ವಿಚಾರಿಸಿದರು. ಬೆಚ್ಚಗೆ ಬ್ರೇಕ್ ಫಾಸ್ಟ್ ಮಾಡಿ ಊರು ಸುತ್ತೋಕೆ ಹೊರ‍ಟೆ.

ಬಸ್ರಿಕಟ್ಟೆ ಬದಲಾಗಿಲ್ಲ. ಬದಲಾಗೋದೂ ನಮಗೆ ಬೇಕಿಲ್ಲ. ಎರಡು ವರ್ಷಕ್ಕೊಮ್ಮೆ ಇಲ್ಲಿನ ರಸ್ತೆಗೆ ಡಾಂಬಾರು ಹಚ್ಚಿ ಹೋಗುತ್ತಾರೆ. ಕಾಲುದಾರಿಯಲ್ಲಿ ಬರಿಗಾಲಲ್ಲಿ ಮೈಲಿಗಟ್ಟಗೆ ನಡೆಯೋ ಇಲ್ಲಿಯವರಿಗೆ ಅದು ಕಾಡುವ ಸಮಸ್ಯೆಯೇನಲ್ಲ. ಸ್ವಚ್ಛ ಊರು. ಹಾಗೆಯೇ ಮನಸ್ಸಿರೋ ಜನ. ಹತ್ತಿರದ ಊರು ಕುಪ್ಪಳ್ಳಿ, ಪಕ್ಕಕ್ಕೆ ತಾಗಿ ಮಲಗಿರೋ ಕಾಫಿ ತೋಟ, ತಲೆ ಇತ್ತಿ ಮುಖ ಮಾಡಿರೋ ಕುದುರೆಮುಖ, ನೆರಳಾಗಿ ನಿಂತಿರೋ ಮೇರುತಿ ಬೆಟ್ಟ. ಅರೆಕ್ಷಣ ಅಲ್ಲಿ ನಿಂತಿದ್ದ ನಾನು ಬರೇ ಸೂಕ್ಷ್ಮ! ಬಹುಶಃ ಇದೇ ಇರಬೇಕು ಹಳ್ಳಿ ಪ್ರೀತಿ.

ಉಳಿದೆರಡೂ ದಿನ ಗಮ್ಮತ್ತು. ಹಬ್ಬ ಹಬ್ಬ ಹಬ್ಬ. ಆತ್ಮೀಯ ಗೋಪಾಲ್ ಹಾಗೂ ಗೆಳೆಯರೊಂದಿಗೆ ತಡರಾತ್ರಿಯ ಸುಗಮ ಸಂಗೀತ. ನೆನೆಸಿಕೊಂಡರೆ ನಗು. ಜಿಟಿ ಜಿಟಿ ಮಳೆಯೊಂದಿಗೆ ಸಂಭ್ರಮದ ಓಡಾಟ. ಇಷ್ಟಾದರೂ ಕೆಲಸದೂರು ಬೆಂಗಳೂರು ನೆನಪಾಗಲಿಲ್ಲ. ನೆನಪು ಮಾಡಿಕೊಳ್ಳಲೂ ಮನಸಾಗುತ್ತಿರಲಿಲ್ಲ.

ಮೂರನೇ ಕ್ಲಾಸಿನಲ್ಲಿರುವಾಗ ಶಂಕರ ಹೆಗಡೆ ಅಂಗಂಡಿಯಿಂದ ಮಸಾಲೆ ಕಡಲೆ ಕದ್ದಾಗ ಆದ ಅನುಮಾನವೇ ದೊಡ್ಡದೆಂದು ನಂಬಿದ್ದೆ. ಆದರೆ ಅದಕ್ಕಿಂದ ಮಿಗಿಲಾದ ಮೊಗೆದಷ್ಟು ಪ್ರೀತಿ ಈ ಊರಲ್ಲಿದೆ ಅನ್ನೋದು ಈಗ ಕಂಡುಕೊಂಡಿದ್ದೀನಿ. ಎಲ್ಲೋ ಓದಿದ್ದೆ. ‘ಬದುಕು ಪ್ರಿಯ ಅನಿಸೋದು ಅಲ್ಲಿಯ ಸುಂದರ ಕಟ್ಟಡಗಳಿಂದಲ್ಲ. ಸುತ್ತಲ ಜನರಿಂದ’. ಮತ್ತೆ ಮುಂಜಾವು. ನುಗ್ಗಿ ಬರುತ್ತಿತ್ತು ಮಳೆ. ವಾಪಾಸು ಹೊರಡಬೇಕು ರಾಜಧಾನಿಗೆ. ಆ ಜಡಿ ಮಳೆಯಲ್ಲೂ ಬೈಕ್ ಏರಿ ಬಸ್ಸು ಹತ್ತಿಸಿದ ಆತ್ಮೀಯ ಆನಂದ್.
ಬಿಟ್ಟು ಬಂದಿದ್ದೀನಿ. ಮೆತ್ತಗೆ ಕಾಡುವ ಮಾತನಾಡುವ ಊರನ್ನು ಮತ್ತೆ ಬರುತ್ತೀನಿ ಅನ್ನೋ ಮಾತು ಕೊಟ್ಟು. ಮುಂದಿನ ಬಾರಿ ನೀವೂ ಬನ್ನಿ. ನನ್ನೂರಿಗೆ...

16 comments:

ಮನಸು said...

nimma lekhana tumba chennagide haage nimma oorina melina preeti eddu kaaNuttide..

ಬದುಕು ಪ್ರಿಯ ಅನಿಸೋದು ಅಲ್ಲಿಯ ಸುಂದರ ಕಟ್ಟಡಗಳಿಂದಲ್ಲ. ಸುತ್ತಲ ಜನರಿಂದ’ ee maatu nija..
nimma lekhanadalle oorige karedukondogiddeeri hahaha

sharu said...

nija aa uralli mogidastu....kaliyagada preeti ide hage nimmalu.......

Shreenidhi Odilnala said...

Laxmi, nijavglu ninna braha odi nanu omme urige higi banda anubhava aythu. alli sigo khushi, santhosa, prithi wow...!! olle baraha...:)

ಸಿಬಂತಿ ಪದ್ಮನಾಭ Sibanthi Padmanabha said...

oorinda doora iddaaga oorina preethi nooraagutte, alva yekantha?

ಶ್ರೀನಿವಾಸಗೌಡ said...

ತುಂಬಾ, ತುಂಬಾ, ತುಂಬಾ. ಚೆನ್ನಾಗಿ ಬರೀತೀಯಾ ಕಾಂತ.
ಯೋಕೋ ನಿನ್ನ ಬರಹ ನನಗೂ ಅನ್ವಯಿಸಿದೆ ಅನಿಸಿತು.

ಏಕಾಂತ said...

ನಮಸ್ತೆ ಪದ್ಮನಾಭರೆ...
ನೀವಂದಿದ್ದು ನಿಜ. ಊರಿಂದ ದೂರವಿದ್ದಷ್ಟು ಪ್ರೀತಿ ನೂರಾಗುತ್ತೆ. ಆ ಪ್ರೀತಿಯನ್ನು ಪ್ರತಿಕ್ಷಣ ಮಿಸ್ ಮಾಡ್ಕೊತಿದಿನಿ. ಬಹುಶಃ ನೀವೂ ಕೂಡಾ. ಹೀಗೇ ಬರುತ್ತಾ ಇರಿ.
ಹಾಯ್ ಗೌಡ್ರೆ, ತುಂಬಾ ತುಂಬಾ ಥ್ಯಾಂಕ್ಸ್. ಬರೀಬೇಕು ಅಂತಾ ಕುಂತ್ರೆ ಏನೂ ಬರಿಯೋಕಾಗಲ್ಲ. ಆದ್ರೆ ಈ ಬರಹ ಚಟ್ ಅಂತಾ ಬರೆದುಹೋಯ್ತು! ನಿಜ ಕಾಡುವ ಮೌನ ಒಂದಿದೆ. ಖುಷಿಯಾಯ್ತು ಬಂದಿದ್ದಕ್ಕೆ. ಮತ್ಯಾವಾಗ್ ಬರ್ತೀರಾ..

ಧರಿತ್ರಿ said...

ನಮ್ಮೂರೇ ಚೆಂದ ಅಲ್ವಾ?
ನಂಗೂ ಹೀಗೇ ಅನಿಸುತ್ತೆ..ಊರಿಗೆ ಹೋದಾಗಲೆಲ್ಲಾ...
ನಾನೂ ಮೊನ್ನೆ ಹೋಗಿ ಬಂದೆ...
-ಧರಿತ್ರಿ

Datta3 said...

ಮೊನ್ನೆ ತಾನೇ ಊರಿಂದ ಎಲ್ಲ ಬೇರು ಕಳಚಿಕೊಂಡು ಬಂದಿರೋ... ನಮಗೆ, ಹೊಟ್ಟೆ ಉರಿಯುವಷ್ಟು ಚೆನ್ನಾಗಿ ಬರೆದಿದ್ದೀರಿ ....
ಯಶಸ್ಸಾಗಲಿ ನಿಮಗೆ

Unknown said...
This comment has been removed by the author.
Unknown said...

ತುಂಬಾ..... ಚೆನ್ನಾಗಿ ಬರೀತೀರಾ ಲಕ್ಶ್ಮಿ ............. but nevu nemma hosa ಬರಹನಾ nam hatranu share madkoli pls.....

Unknown said...

ನಮ್ಮ ಊರಿನ ನೆನಪುಗಳು ಮಾನವನು ಮುತ್ತಿ,ಮುತ್ತಿ ಕಾಡುವ ಪರಿಯೇ ಎಷ್ಟು ಚೆಂದ ಗೆಳೆಯ..ನಿನ್ನ ಬರಹ ಎಲ್ಲರ ಮನದ ನೆನಪುಗಳು ಒಂದೇ ಗುಕ್ಕಿಗೆ ಮರುಕಳಿಸುವಂತೆ ಮಾಡುತ್ತದೆ.ಆಪ್ತ ಬರಹಗಳ ಸರ ಮಾಲೆ ಮುಂದುವರೆಯಲಿ ಏಕಾಂಗಿಗಳೇ.......

ಏಕಾಂತ said...

* ಹಾಯ್ ಧರಿತ್ರಿ..ನಿಜ ನಮ್ಮೂರೇ ಚೆಂದ. ನಾನೂ ಮತ್ತೊಮ್ಮೆ ಹೋಗುತ್ತಿದ್ದೇನೆ. ಕಮೆಂಟ್‍ಗೆ ಥ್ಯಾಂಕ್ಸ್. ಮತ್ತೆ ಬನ್ನಿ..
* ಹಲೋ ದತ್ತಾತ್ರಿ... ಬ್ಲಾಗ್ ಭೇಟಿಕೊಟ್ಟಿದ್ದಕ್ಕೆ ಖುಷಿಯಾತ್ತು. ನಿಮ್ಮ ಶುಭ ಹಾರೈಕೆ ಸದಾ ಇರಲಿ. ಮತ್ತೆ ಬರೆಯಲು ಮತ್ತೊಂದು ಕಾರಣ ಸಿಕ್ತು ನಿಮ್ಮ ಮೆಚ್ಚುನುಡಿಯಿಂದ. ಬರ್ತಾ ಇರಿ..
* ಶೃತಿ ಥ್ಯಾಂಕ್ ಯು ಸೋ ಮಚ್. ಖಂಡಿತಾ ತಪ್ಪದೇ ಶೇರ್ ಮಾಡ್ತೀನಿ. ಬರೆಯೋದೇ ಅದಕ್ಕೆ ಅಲ್ವಾ. ಮತ್ತೆ ಬನ್ನಿ..
* ನಿಜ ಈಶ. ಬರೆವಣಿಗೆಯ ನೆಮ್ಮದಿಯ ಮಜಾನೇ ಬೇರೆ. ಬಂದು ಓದಿಕೊಂಡದ್ದು ತುಂಬಾ ಸಂತೋಷ. ಹೀಗೆ ಬರುತ್ತಿರಬೇಕು..

ಶಾಂತಲಾ ಭಂಡಿ (ಸನ್ನಿಧಿ) said...

ಲಕ್ಷ್ಮೀಕಾಂತ್ ಅವರೆ...

ಊರಿನ ಬಗ್ಗೆ ಸುಂದರವಾಗಿ ಬರೆದಿದ್ದೀರಿ. ನಾನೂ ಹೋಗಿಬರಬೇಕೆನ್ನಿಸುವ ಹಾಗೆ.

sush said...

adrikaanada kadalige hambaliside mana. . . . .

ಶಿವರಾಮ ಭಟ್ said...

ಆಹಾ
ಮಧುರ ಭಾವನೆಗಳು ಉಕ್ಕಿ ಹರಿದವು..
"ಏಕಾಂತ" ಅನ್ನುವ ತಮ್ಮ ಹೆಸರು ಗಮನ ಸೆಳೆಯಿತು.
ಕೀರ್ತನ ಅವರ ಯಕ್ಷಗಾನದ ಹಾಡನ್ನು [ಸುವರ್ಣ ವಾಹಿನಿಯ confident star singer ] "ಯೌತುಬೆ"ಗೆ
upload ಮಾಡಿದ್ದು ತಾವೇನ?
ನೂರು ಬಾರಿ ಕೇಳಿದ್ದೇನೆ. ಆ ಹಾಡನ್ನು.
ಶಿವರಾಮ ಭಟ್

Raghu said...

hello yekantha avare,
nimma youtube page inda illige bande. nimma leekhana tumba chennagide. i too miss my native village very much & feel nostalgic when i read blogs on such material..
keep up the good work, both on youtube & blogspot..
Jai Karnataka